ಶುಕ್ರವಾರ, ಡಿಸೆಂಬರ್ 16, 2016

ನಾನು ಮತ್ತು 2005 ರ ಬೆಂಗಳೂರು

ಅದು ೨೦೦೫ ರ ಮದ್ಯೆ
ಬೆಂಗಳೂರಿಗೆ ಕಾಲಿಟ್ಟಿದೆ

ಆ ಕಾರು ಜೀಪು  ಬಸ್ಸುಗಳ ಮಧ್ಯೆ
ನಾನೆಂಬ ನಾನು ಕಳೆದು ಹೋಗಿದ್ದೆ 
ಅದು ಶಬ್ದಗಳ ನಗರ 
ಮೌನವೆಂಬ ನಗರ ಅಲ್ಲಿಂದ 1050 ಕಿಲೋಮೀಟರುಗಳು 

ನನ್ನಂತವರು ನಿಮ್ಮಂಥವರು 
ಅಲ್ಲಿ ಸಾಗರದಸ್ಟು ,
ಹರಿವ ನೀರಿನಂತೆ ನಡೆದಾಡುವರು 

 ನಗುವೆಂಬ ಬಂಗಾರ  
ಕಡಿಮೆ ಇಲ್ಲಿ  ,
ಕಳೆವರು ಸಮಯ
ದುಡಿಮೆಯಲ್ಲಿ  

ಹತ್ತು ಹಲವರ ಮದ್ಯೆ 
ನಗುವವರಿಬ್ಬರು 
ಅವರೂ  ಬೇರೆ ರಾಜ್ಯದವರು  

ಬೆಲೆ ಕಟ್ಟಿನೋದು  ಈ ಊರ ಸೌಂದರ್ಯ
ಅಬ್ಬಾ  ! ಎಷ್ಟು ದೊಡ್ಡದು  ಈ ಜನಗಳ ಔದಾರ್ಯ

ಸುತ್ತಿ  ಬಳಸಿ ಹೋಗುವ ಈ ಬಸ್ಸುಗಳು
ಕಪ್ಪು ಹೊಗೆ ಕಾರದ  ಕಾರುಗಳು
ಗುಡು ಗುಡು  ಗುಡುಗನ್ನೇ ಸೀಳುವ  ಹೆಲಿಕ್ಯಾಪ್ಟರ್ಗಳು

ಕಣ್ಣ್ಮುಚ್ಚಿ  ಬಿಡುವುದರೊಳಗೆ ಇನ್ನೊಂದು
ಲೋಕಕೆ ಕಳಿಸುವ ವಾಹನಗಳು
ಜೀವನದ ಅರ್ಧ ಆಯಸ್ಸು ವಾಹನಗಳಲ್ಲೇ
ಕಳೆಯುವ ಇಲ್ಲಿನ ಯಂತ್ರ ಮಾನವರು

ರಸ್ತೆ ಹಾರಿಸುವ ಬೈಕ್ಗಳು
ಅಪರೂಪಕ್ಕೆಬಂತೆ ಸೈಕಲ್ಗಗಳು
ಮಂದ  ಮೈಮನಸ್ಸುಗಳ  ಹೊತ್ತ
ಚಿತ್ರ ವಿಚಿತ್ರ ಜನರ  ವೇಷಗಳು

ಇದೆಲ್ಲದರ ಮಧ್ಯ
ಕೆಲಸವಿಲ್ಲದ ನನ್ನಂಥವನೂ
ಕಳೆದು ಹೋದ  ಸಮಯವನ್ನು
ಕೈಗಡಿಯಾರದಲಿ ನೋಡುತ್ತಾ ಕುಳಿತಿದ್ದೆ