ಭಾನುವಾರ, ಡಿಸೆಂಬರ್ 28, 2014

ತಿರುಗಿ ನೋಡು ಒಮ್ಮೆ

ಗೆಳೆಯ,
ನಿನಗೊಮ್ಮೆ ಸಮಯ ಸಿಕ್ಕಾಗ
ತಿರುಗಿ ನೋಡು ಜೀವನದಲ್ಲೊಮ್ಮೆ

ತಿರುಗಿ ನೋಡಿದಾಗ ಕಂಡದ್ದೇನು ?

ಎಷ್ಟೊಂದು ಮುದ್ದಿನ ಮಂಜಿನ ಮುಂಜಾನೆಗಳು
ರಣ ಬಿಸಿಲಿನ ನಂತರದ ಸುಂದರ ಸಂಜೆಗಳು

ಗೆಳೆಯರ ಒಡನಾಟಗಳೆಸ್ಟೋ
ಅವರೊಂದಿಗೆ ಆಡಿದ ಆಟಗಳೆಷ್ಟೋ
ಮಾತು ಮೌನಗಳೆಸ್ಟೋ
ಸರಸ ವಿರಸಗಳೆಷ್ಟೋ

ನಡುವೆ ಬಂದು ಹೋದ ಗೆಳೆಯರೆಷ್ಟೋ
ಎಲ್ಲಾ ಎಷ್ಟು ಹರಟಿದ್ದೆವು
ಅಲ್ಲೇ ಎಲ್ಲಿಗೋ ಹೊರಟಿದ್ದೆವು
ಎನೋ  ಆತುರ , ಏನೋ ಕಾತುರ

ನೆಚ್ಚಿನ ಗೆಳತಿಯ ತುಂಟ ನೋಟಗಳೆಸ್ಟೋ
ಅವಳಿಗೆ  ಖರ್ಚು ಮಾಡಿದ ನೋಟುಗಳೆಷ್ಟೋ
ಅವಳಿಗಾಗಿ ಬರೆದ ಕವನ
ಇಂದಿಗೂ ನನ್ನ ನೆಚ್ಚಿನ ಕವನ

ಅಂದು ಬಯಲಿನಲ್ಲಿ ಆಡಿ ಬೆಳೆದವರು ನಾವು
ಕಳೆದಿದ್ದೆವು ನಮ್ಮ ಬಾಲ್ಯಗಳನ್ನು
ಇಂದು ಅದು ಸಂತೆಯ ಮೈದಾನ
ಆದರೆ ಯಾವ ವರ್ತಕನೂ ಮಾರುತಿರಲಿಲ್ಲ ನಮ್ಮ ಬಾಲ್ಯಗಳನ್ನ !

ಇಷ್ಟೇ  ಅಲ್ಲ ,
ಇಲ್ಲಿ ಜಯ ಸಿಕ್ಕದ ಹೋರಾಟಗಳಿವೆ
ಗುರಿ ಇರದ ಅಲೆದಾಟಗಳಿವೆ
ಎಲ್ಲಾ  ಸರಿ ಇದ್ದೂ
ಏನು ಸಿಗದೇ ಇದದ್ದೂ  ಇದೆ

ಯಾರಿಗೋ ಕಾದದ್ದು
ಯಾರಿಗೋ ಬೈದದ್ದು
ಎಲ್ಲೋ ಹುಡುಕಿ
ಕೊನೆಗೆ ಜೇಬಿನಲ್ಲೇ ಸಿಕ್ಕಿದ್ದು !

ಬಿದ್ದಾಗ ಕಾಲಿನ ಗಾಯ
ಕ್ರಿಕೆಟ್ ಆಡಿದಾಗ ಮಾಯಾ
ಶಾಲೆಯ ಗೆಳೆಯರ ನಾಟಕದ ಪಾತ್ರ
ವೇದಿಕೆಯಲ್ಲಿ ಆದ ಅವಾಂತರ

ಅದು ಪರೀಕ್ಷೆಯ ಸಮಯ
ನಕಲು ಮಾಡಿ ಸಿಕ್ಕವರೆಷ್ಟೋ
ಬೇಗ ಎದ್ದು ಹೋದವರೆಷ್ಟೋ
ಸಮಯ ಸಿಕ್ಕಲಿಲ್ಲವೆನ್ದವರೆಷ್ಟೋ

ಅಜ್ಜಿ ಮನೆಯ ಅಂಗಳ
ತೇವಗೊಳಿಸುತ್ತವೆ ನನ್ನ ಕಂಗಳ
ಮಾವಿನ ಮರಕ್ಕೆ ಹೊಡೆದಾಗ  ಕಲ್ಲು
ಹಿಂದೆಯೇ ಮಾವ ತಂದಿದ್ದರು ಕೋಲು

ಇದೆಲ್ಲ ಯೋಚಿಸುತಿದ್ದರೆ ನಾವು
ಬಂದ ದಾರಿಯಲಿ ಮರಳಬೇಕೆನಿಸುವುದು
ಇಲ್ಲಿ ಮುನ್ನಡೆಯುವುದು  ಜಯವಲ್ಲ
ಮರಳಿ ಹಿಂದಿರುಗುವುದೇ ವಿಜಯ !

ಆದರಿಂದು,
ಸರಿದಿವೆ ಆ ಸುಂದರ ಕ್ಷಣಗಳು
ಸವೆದಿವೆ ಈ ವಯಸ್ಸುಗಳು
ಭೂಮಿ ಹಿಂತಿರುಗಿ ಸುತ್ತಬಾರದೆ
ನಾ ಬಾಲ್ಯದಲಿ ಕಂಡ  ಹಕ್ಕಿ ಮರಳಿಬರಬಾರದೇ ?

ಗೆಳೆಯ,
ಕರಗಿ ಹೋಗಬೇಡ ನೆನಪಿನಂಗಳದಲೀ,
ಮರಳಿ ಬಂದು ಬಿಡು
ಈ ಜಗತ್ತಿಗೆ,
ಮತ್ತೆಂದಾದರೂ ಸಮಯ ಸಿಕ್ಕರೆ
ಮರಳಿ ಹೋಗೋಣ ತಾಯಿ  ಗರ್ಭಕ್ಕೆ.... !

ಶನಿವಾರ, ಡಿಸೆಂಬರ್ 27, 2014

ಎಲೆಕ್ಷನ್

ಈ ಬಾರಿಯೂ ಎಲೆಕ್ಷನ್ನಲ್ಲಿ
ಅವನೇ ಗೆದ್ದ,
ಗೆದ್ದ  ಸಂಭ್ರಮದಲ್ಲಿ ರಸ್ತೆಯ
ಮುಂದಿದ್ದ ಗುಂಡಿಯಲ್ಲಿ ಬಿದ್ದ  !

ನಮ್ಮ ಬಾಸು

ಅಂದು  ಕಾರಿನಲ್ಲಿ ಹೋಗುತಿದ್ದರು
ನಮ್ಮ ಬಾಸು ,
ಇಂದು ನೆಡೆದು ಹೋಗುತಿದ್ದಾರೆ
ಏಕೆಂದರೆ  ಅವರೀಗ ಫುಲ್ಲು ಲಾಸು . 

ಭಾನುವಾರ, ಡಿಸೆಂಬರ್ 21, 2014

ನರರಾಕ್ಷಸರ ನಾಶ

 ಸುಳಿವು ಕೊಡದಿರು ಮುಂಚೆಯೇ
ಒಮ್ಮೆಯೇ  ಬಂದುಬಿಡು  ಈ ಸಂಜೆಯೇ

ಸಡಿಲ ಮಾಡಬೇಡ   ಸಿಡುಕನ್ನ
ಸಾವಿರ  ಸಿಡಿಲಾಗಿ ಬಾ , ಸವಾಲಾಗಿ ಬಾ

ಹಾಸಿಗೆ ಸೇರುವ ಮುನ್ನ ಹೊಸಕಿ ಬಿಡು
ಕನಸು  ಕಾಣುವ ಮೊದಲೇ ಸಾವು  ಕೊಡು

ನೀ ತಡ  ಮಾಡಿದರೆ ಇವರು ಅಬ್ಬರಿಸುವರು
ಕೊಬ್ಬಿದ ಗೂಳಿಗಳಾಗಿ  ಬೊಬ್ಬಿರಿಯುವರು

ವಿಧಿ ವಶರನ್ನಾಗಿ ಮಾಡು, ಕರುಣೆ  ಇಲ್ಲದೆ
ಇವರ ನಾಶ  ಮಾಡು

ದುಷ್ಟ ಜನರ ಸಂಹಾರದಲಿ
ಶಿಷ್ಟರನು ರಕ್ಷಿಸು

ಸಜ್ಜನರ ಸರತಿಯಲಿ
ದುರ್ಜನರು ಇಲ್ಲದಿರಲಿ

ಮತ್ತೆ  ತರಬೇಡ ಭುವಿಯ ಮೇಲೆ
ನರರಾಕ್ಷಸರು ಮತ್ತೆಂದಿಗೂ ಬೇಡ

 ಅವತರಿಸು ಭುವಿಯ  ಮೇಲೆ
ತಂಪಾಗಲಿ ಈ ಇಳೆ