ಸುಳಿವು ಕೊಡದಿರು ಮುಂಚೆಯೇ
ಒಮ್ಮೆಯೇ ಬಂದುಬಿಡು ಈ ಸಂಜೆಯೇ
ಸಡಿಲ ಮಾಡಬೇಡ ಸಿಡುಕನ್ನ
ಸಾವಿರ ಸಿಡಿಲಾಗಿ ಬಾ , ಸವಾಲಾಗಿ ಬಾ
ಹಾಸಿಗೆ ಸೇರುವ ಮುನ್ನ ಹೊಸಕಿ ಬಿಡು
ಕನಸು ಕಾಣುವ ಮೊದಲೇ ಸಾವು ಕೊಡು
ನೀ ತಡ ಮಾಡಿದರೆ ಇವರು ಅಬ್ಬರಿಸುವರು
ಕೊಬ್ಬಿದ ಗೂಳಿಗಳಾಗಿ ಬೊಬ್ಬಿರಿಯುವರು
ವಿಧಿ ವಶರನ್ನಾಗಿ ಮಾಡು, ಕರುಣೆ ಇಲ್ಲದೆ
ಇವರ ನಾಶ ಮಾಡು
ದುಷ್ಟ ಜನರ ಸಂಹಾರದಲಿ
ಶಿಷ್ಟರನು ರಕ್ಷಿಸು
ಸಜ್ಜನರ ಸರತಿಯಲಿ
ದುರ್ಜನರು ಇಲ್ಲದಿರಲಿ
ಮತ್ತೆ ತರಬೇಡ ಭುವಿಯ ಮೇಲೆ
ನರರಾಕ್ಷಸರು ಮತ್ತೆಂದಿಗೂ ಬೇಡ
ಅವತರಿಸು ಭುವಿಯ ಮೇಲೆ
ತಂಪಾಗಲಿ ಈ ಇಳೆ
ಒಮ್ಮೆಯೇ ಬಂದುಬಿಡು ಈ ಸಂಜೆಯೇ
ಸಡಿಲ ಮಾಡಬೇಡ ಸಿಡುಕನ್ನ
ಸಾವಿರ ಸಿಡಿಲಾಗಿ ಬಾ , ಸವಾಲಾಗಿ ಬಾ
ಹಾಸಿಗೆ ಸೇರುವ ಮುನ್ನ ಹೊಸಕಿ ಬಿಡು
ಕನಸು ಕಾಣುವ ಮೊದಲೇ ಸಾವು ಕೊಡು
ನೀ ತಡ ಮಾಡಿದರೆ ಇವರು ಅಬ್ಬರಿಸುವರು
ಕೊಬ್ಬಿದ ಗೂಳಿಗಳಾಗಿ ಬೊಬ್ಬಿರಿಯುವರು
ವಿಧಿ ವಶರನ್ನಾಗಿ ಮಾಡು, ಕರುಣೆ ಇಲ್ಲದೆ
ಇವರ ನಾಶ ಮಾಡು
ದುಷ್ಟ ಜನರ ಸಂಹಾರದಲಿ
ಶಿಷ್ಟರನು ರಕ್ಷಿಸು
ಸಜ್ಜನರ ಸರತಿಯಲಿ
ದುರ್ಜನರು ಇಲ್ಲದಿರಲಿ
ಮತ್ತೆ ತರಬೇಡ ಭುವಿಯ ಮೇಲೆ
ನರರಾಕ್ಷಸರು ಮತ್ತೆಂದಿಗೂ ಬೇಡ
ಅವತರಿಸು ಭುವಿಯ ಮೇಲೆ
ತಂಪಾಗಲಿ ಈ ಇಳೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ