ಓ ಜೀವ ಎಲ್ಲಿರುವೆ
ನಿನ್ನನೇ ಹುಡುಕುತಿರುವೆ
ಯಾರ ಕಣ್ಮುಂದೆ ಕಾಣಿಸುವೆ
ಯಾರ ದಿವ್ಯ ದೃಷ್ಟಿಗೆ ಸಿಲುಕಿರುವೆ
ನೀ ಬಂದಾಗ ಬಳಿಗೆ
ಅದು ಸಂತೋಷದ ಘಳಿಗೆ
ನೀ ಹೊರಟು ಹೋದಾಗ
ಅದೇ ನಮ್ಮ ಕೊನೆ ಘಳಿಗೆ
ತಿಳಿದಿಲ್ಲ ನಾವು ನಿನ್ನ ಮೂಲ
ಈ ಜೀವನವೇ ನಿನ್ನ ಸಾಲ
ನೀ ಎಲ್ಲಿರುವೆ
ನಾ ತಿಳಿದಿರುವೆ
ಅವಿತಿರುವೆ ದೇಹದೊಳಗೆ
ಹೃದಯದಲಿ ಅರಳಿರುವೆ
ರಕ್ತದ ಕಣ ಕಣದಲಿ ಕರಗಿರುವೆ
ನಿನ್ನನೇ ಹುಡುಕುತಿರುವೆ
ಯಾರ ಕಣ್ಮುಂದೆ ಕಾಣಿಸುವೆ
ಯಾರ ದಿವ್ಯ ದೃಷ್ಟಿಗೆ ಸಿಲುಕಿರುವೆ
ನೀ ಬಂದಾಗ ಬಳಿಗೆ
ಅದು ಸಂತೋಷದ ಘಳಿಗೆ
ನೀ ಹೊರಟು ಹೋದಾಗ
ಅದೇ ನಮ್ಮ ಕೊನೆ ಘಳಿಗೆ
ತಿಳಿದಿಲ್ಲ ನಾವು ನಿನ್ನ ಮೂಲ
ಈ ಜೀವನವೇ ನಿನ್ನ ಸಾಲ
ನೀ ಎಲ್ಲಿರುವೆ
ನಾ ತಿಳಿದಿರುವೆ
ಅವಿತಿರುವೆ ದೇಹದೊಳಗೆ
ಹೃದಯದಲಿ ಅರಳಿರುವೆ
ರಕ್ತದ ಕಣ ಕಣದಲಿ ಕರಗಿರುವೆ
ಈ ಜೀವನಕೆ ಜೀವವಾದೆ
ಭಾಷೆಗೆ ಅರ್ಥವಾದೆ
ಸಂಗೀತಕೆ ರಾಗವಾದೆ
ಹರಿಯುವ ನೀರಿಗೆ ವೇಗವಾದೆ
ಹಾರುವ ಹಕ್ಕಿಗೆ ರೆಕ್ಕೆಯಾದೆ
ಕೊನೆಗೆ ಈ ಕವಿತೆಗೆ ಶಾಯಿಯಾದೆ !
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ