ಭಾನುವಾರ, ಫೆಬ್ರವರಿ 26, 2017

ಯಾರಿವರು

ಅವರನ್ನು ಕೇಳಲಿಲ್ಲ
ಇವರನ್ನು ಕೇಳಲಿಲ್ಲ
ಕೇಳಿದೆ ಇವರ  ಮಾತನ್ನು
ಯಾರಿವರು ?

ಇವರು ನನ್ನೊಳಗಿರುವವರು
ಇವರೆಲ್ಲ ನನ್ನವರು
ನನ್ನೊಳಗೆ  ಅವಿತಿರುವವರು
ಆಗಾಗ್ಗೆ ಇಣುಕುವರು ,ಮನಸ ಕೆದಕುವರು

ಒಬ್ಬ ಭಾವುಕ , ಇನ್ನೊಬ್ಬ ಅತಿರೇಕ
ಇನ್ನೊಬ್ಬ ಮೌನೀ ,ಮಗದೊಬ್ಬ ಕ್ರೂರಿ
ಕೊನೆಯಲ್ಲೊಬ್ಬ ಮಹಾನ್  ಸ್ವಾರ್ಥಿ
ಹೀಗೆ ಹಲವರಲ್ಲಿ ಕೆಲವರಿವರು

ಕೆಲವೊಮ್ಮೆ ನನ್ನ  ಬೀಳಿಸಿದ್ದಾರೆ
ಇನ್ನೊಮ್ಮೆ ಬಳಸಿದ್ದಾರೆ,ಬೆಳಸಿದ್ದಾರೆ 
ಸ್ನೇಹಿತನ ದೂರವಿರಿಸಿ
ಇನ್ನ್ಯಾರನ್ನೋ ಮನಸಿನಲ್ಲಿ ಕೂರಿಸಿದ್ದಾರೆ

ಇವರುಗಳು ನಿಮ್ಮೊಳಗೂ ಇರುವರು
ನಿಮ್ಮ ಮನಸಿನಂಗಳದಲಿರಬಹುದು
ಹುಡುಕಿ ನೋಡಿ

ಏಕಾಂಗಿ

ಕೆಲವೊಮ್ಮೆ ನಾನು ಏಕಾಂಗಿ
ಹೌದು , ತವರು ಮನೆಯಲ್ಲಿದ್ದಾಳೆ ನನ್ನ ಅರ್ಧಾoಗೀ  

ಪ್ರವಾಸ

ಇಡೀ ಜಗತ್ತನ್ನೇ ಸುತ್ತಿ ನನ್ನೂರಿಗೆ ಬಂದೆ 
ಆ ಕ್ಷಣ ನನ್ನ ಮನಸಿಗನಿಸಿದ್ದು ಒಂದು 
ಭೂಮಿ ಗುಂಡಾಗಿದೆಯಂದು ,
ನನ್ನ ಪ್ರವಾಸ ಮುಗಿದಿದೆಯಂದು !

ಡೈರಿ

 ನಿನ್ನೆಗಳ ಬರೆದಿಟ್ಟೆ  ನಾನು 
ಎಲ್ಲ ಕ್ಷಣಗಳ  ಹಿಡಿದಿಟ್ಟೆ ನೀನು 
ತಿಳಿದಿದೆ ನಿನಗೆ ನಾ ನಡೆದು ಬಂದ  ದಾರಿ 
ನಿನ್ನ ನಾ ಕರೆಯಲೇ ಡೈರಿ

ನೀರು

ಕುಡಿಯುವ ನೀರಿಗೆ ಜನರ ಹಾಹಾಕಾರಾ
ಅದಕ್ಕೆ ಜನರ ಬೆವರಿಳಿಸುತ್ತಿದೆ ಈ ಸರ್ಕಾರ

ಟೈಟಾನಿಕ್

ಪ್ರೀತಿ  ಪ್ರೇಮಕ್ಕೆ  ಟೈಟಾನಿಕ್
ಶೀತ ನೆಗಡಿಗೆ ಟ್ರೈ ಟಾನಿಕ್