ಶುಕ್ರವಾರ, ನವೆಂಬರ್ 28, 2014

ಓ ಜೀವ

ಓ ಜೀವ ಎಲ್ಲಿರುವೆ
ನಿನ್ನನೇ  ಹುಡುಕುತಿರುವೆ

ಯಾರ ಕಣ್ಮುಂದೆ ಕಾಣಿಸುವೆ
ಯಾರ ದಿವ್ಯ ದೃಷ್ಟಿಗೆ ಸಿಲುಕಿರುವೆ

ನೀ ಬಂದಾಗ ಬಳಿಗೆ
ಅದು ಸಂತೋಷದ ಘಳಿಗೆ
ನೀ ಹೊರಟು  ಹೋದಾಗ
ಅದೇ ನಮ್ಮ ಕೊನೆ ಘಳಿಗೆ

ತಿಳಿದಿಲ್ಲ ನಾವು ನಿನ್ನ ಮೂಲ
ಈ ಜೀವನವೇ  ನಿನ್ನ ಸಾಲ

ನೀ ಎಲ್ಲಿರುವೆ
ನಾ ತಿಳಿದಿರುವೆ

ಅವಿತಿರುವೆ  ದೇಹದೊಳಗೆ
ಹೃದಯದಲಿ ಅರಳಿರುವೆ
ರಕ್ತದ ಕಣ ಕಣದಲಿ ಕರಗಿರುವೆ

ಈ ಜೀವನಕೆ ಜೀವವಾದೆ 
ಭಾಷೆಗೆ ಅರ್ಥವಾದೆ 
ಸಂಗೀತಕೆ ರಾಗವಾದೆ 
ಹರಿಯುವ  ನೀರಿಗೆ  ವೇಗವಾದೆ 
ಹಾರುವ ಹಕ್ಕಿಗೆ ರೆಕ್ಕೆಯಾದೆ 

ಕೊನೆಗೆ ಈ ಕವಿತೆಗೆ ಶಾಯಿಯಾದೆ !

ಸೋಮವಾರ, ನವೆಂಬರ್ 24, 2014

ನಕ್ಕಳು !!!!

ಅಂದು ಅವಳು ಕಾಲೇಜು ಮೆಟ್ಟಿಲು ಹತ್ತುವಾಗ ನಕ್ಕಳು
ಇಂದು  ಅವಳಿಗೆ ನಾಲಕ್ಕು ಮಕ್ಕಳು !

ದೇವರಿಗೆ ಗೊತ್ತು

ದೇವರು ಮನುಷ್ಯನನ್ನ  ಹುಟ್ಟಿಸಿದನ
ಅಥವ
ಮನುಷ್ಯ  ದೇವರನ್ನ  ಹುಟ್ಟಿಸಿದನ
ಆ ದೇವರಿಗೆ ಗೊತ್ತು !

ಹಸಿವು

ಇಸ್ಟಾದರು ಸರಿ  ಅಸ್ಟಾದರು ಸರಿ
ಇದು ಯಾವ ಪರಿ
ಈ  ಹಸಿವಿಗೆ ಎಸ್ಟಾದರು  ಸರಿ

ಇದು ಬೇಡಿ ತಿನ್ನುವ ಹಸಿವಲ್ಲ
ಕೇಳಿ ತಿನ್ನುವ ಹಾಗಿಲ್ಲ
ಹೊಟ್ಟೆ  ತುಂಬಿದರು  ಬಿಡುವುದಿಲ್ಲ!

ಎಲ್ಲವ ಕದ್ದು ತಿಂದು  ತೇಗುವ ನೀಚರಿಗೆ
ಎಲ್ಲಾ ನಿಯಮ ತುಳಿಯುವ ಭ್ರಸ್ಟರಿಗೆ
ಯಾರ ಒಳಿತು ಬಯಸದ  ದುಷ್ಟರಿಗೆ
ಸುಲಭವಾಗಿ ಕೈಗೆ  ಸಿಗುವ ವಸ್ತು  ಲಂಚ 

ಒಂದಿಂಚಿನ ಬೆಳಕು

ಕತ್ತಲೆಯಲಿ ಕಂಡಿತು ಒಂದಿಂಚಿನ ಬೆಳಕು
ಹತ್ತಿರದಿಂದ ನೋಡಿದಾಗ ಕಂಡದ್ದು ಸಿಗರೇಟಿನ ತುಣುಕು