ಮೊದಲ ನೋಟದಲೀ ನಾ ನಿನ್ನ ಅರಿಯಲಿಲ್ಲ
ಅದೇಕೋ ನನ್ನ ಮನಸು ನಿನ್ನ ನೆನೆಯಲಿಲ್ಲ
ಆದರೂ ಈ ಕಂಗಳು ನಿನ್ನ ಮರೆಯಲಿಲ್ಲ
ಕಾಲ ಕಳೆದು ಹೋಗುತಿದೆ
ನೀ ಮಾತ್ರ ಮನೆಯೊಳಗೆ ಕುಳಿತಿರುವೆ
ನಿನ್ನ ದೇಹವು ಮುದುಡಿ ಹೋಗಿದೆ
ನೆನಪಾಯಿತು ನನಗೀಗ
ಈ ಸುಂದರ ಮಳೆಯಲಿ ನೆನೆದಾಗ ,
ನಿನ್ನ ಹೊರಗೆ ಕರೆದೊಯ್ಯಲೇ ?
ಎಷ್ಟು ಹುಡುಕಲಿ ನಿನ್ನ,
ಅಮ್ಮನ ಜೊತೆ ಹೋಗಿರಬಹುದೇನೋ ?
ನನ್ನ ಮೇಲೆ ತುಂಬ ಕೋಪವೇನೋ ?
ನನ್ನನು ಕ್ಷಮಿಸು , ಇನ್ನೆಂದಿಗೂ ಬಿಡುವುದಿಲ್ಲ ನಿನ್ನನು
ಆ ಮಳೆಯೆ ಒಂದು ಮಾಡಲಿ ನಮ್ಮನು
ನಾ ನಿನ್ನ ಕೈ ಹಿಡಿದು ನಡೆವೆ
ಯಾವುದೇ ಬಿರುಗಾಳಿಗೂ ಅಂಜದೆ
ನಾನೆಂದಿಗೂ ನಿನ್ನ ಬಿಡೆ
ಏಕೆಂದರೆ ,
ನೀ ನಮ್ಮ ಮನೆಯಲ್ಲಿರುವ ಒಂದೇ ಒಂದು ಕೊಡೆ !
ಅದೇಕೋ ನನ್ನ ಮನಸು ನಿನ್ನ ನೆನೆಯಲಿಲ್ಲ
ಆದರೂ ಈ ಕಂಗಳು ನಿನ್ನ ಮರೆಯಲಿಲ್ಲ
ಕಾಲ ಕಳೆದು ಹೋಗುತಿದೆ
ನೀ ಮಾತ್ರ ಮನೆಯೊಳಗೆ ಕುಳಿತಿರುವೆ
ನಿನ್ನ ದೇಹವು ಮುದುಡಿ ಹೋಗಿದೆ
ನೆನಪಾಯಿತು ನನಗೀಗ
ಈ ಸುಂದರ ಮಳೆಯಲಿ ನೆನೆದಾಗ ,
ನಿನ್ನ ಹೊರಗೆ ಕರೆದೊಯ್ಯಲೇ ?
ಎಷ್ಟು ಹುಡುಕಲಿ ನಿನ್ನ,
ಅಮ್ಮನ ಜೊತೆ ಹೋಗಿರಬಹುದೇನೋ ?
ನನ್ನ ಮೇಲೆ ತುಂಬ ಕೋಪವೇನೋ ?
ನನ್ನನು ಕ್ಷಮಿಸು , ಇನ್ನೆಂದಿಗೂ ಬಿಡುವುದಿಲ್ಲ ನಿನ್ನನು
ಆ ಮಳೆಯೆ ಒಂದು ಮಾಡಲಿ ನಮ್ಮನು
ನಾ ನಿನ್ನ ಕೈ ಹಿಡಿದು ನಡೆವೆ
ಯಾವುದೇ ಬಿರುಗಾಳಿಗೂ ಅಂಜದೆ
ನಾನೆಂದಿಗೂ ನಿನ್ನ ಬಿಡೆ
ಏಕೆಂದರೆ ,
ನೀ ನಮ್ಮ ಮನೆಯಲ್ಲಿರುವ ಒಂದೇ ಒಂದು ಕೊಡೆ !