ಭಾನೆತ್ತರಕ್ಕೆ ಬಯಕೆ ಇಟ್ಟು
ಭುವಿಯಂಗಳದಿ ಮನೆಯ ಕಟ್ಟಿ
ಮನಸ್ಸಾಗರದಿ ಮುಳುಗುವ
ಅಲ್ಪ ಮನುಜರು ನಾವು
ಭಾನ ಆಚೆ ಹಾರಾಡಿ
ಭುವಿಯ ಒಳಗೆ ಓಡಾಡಿ
ನಮ್ಮೊಳಗೇ ಹೊಡೆದಾಡುವ
ಅಲ್ಪ ಮನುಜರು ನಾವು
ಗಟ್ಟಿ ದೇಹ, ಪುಟ್ಟ ಹೃದಯ
ಗೊತ್ತು ಗುರಿಯಿರದ ಕನಸುಗಳು
ಸಣ್ಣ ಕಣ್ಣು, ದೊಡ್ಡ ದೃಷ್ಟಿ
ಆಸರೆಯಾಗದ ಆಸೆಗಳಿರುವ
ಅಲ್ಪ ಮನುಜರು ನಾವು
ಭುವಿಯಂಗಳದಿ ಮನೆಯ ಕಟ್ಟಿ
ಮನಸ್ಸಾಗರದಿ ಮುಳುಗುವ
ಅಲ್ಪ ಮನುಜರು ನಾವು
ಭಾನ ಆಚೆ ಹಾರಾಡಿ
ಭುವಿಯ ಒಳಗೆ ಓಡಾಡಿ
ನಮ್ಮೊಳಗೇ ಹೊಡೆದಾಡುವ
ಅಲ್ಪ ಮನುಜರು ನಾವು
ಗಟ್ಟಿ ದೇಹ, ಪುಟ್ಟ ಹೃದಯ
ಗೊತ್ತು ಗುರಿಯಿರದ ಕನಸುಗಳು
ಸಣ್ಣ ಕಣ್ಣು, ದೊಡ್ಡ ದೃಷ್ಟಿ
ಆಸರೆಯಾಗದ ಆಸೆಗಳಿರುವ
ಅಲ್ಪ ಮನುಜರು ನಾವು